Sunday, July 25, 2021

ಸಂಸತ್‌ನಲ್ಲಿ ‘ಪೆಗಾಸಸ್’ ಕೋಲಾಹಲ: ಸಚಿವರ ಕೈಯಿಂದ ಕಾಗದ ಕಿತ್ತು ಹರಿದುಹಾಕಿದ ಟಿಎಂಸಿ ಸಂಸದ

Must Read
ಹೊಸದಿಲ್ಲಿ: ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಕೋಲಾಹಲ ಮುಂದುವರಿದಿದೆ. ವಿರೋಧಪಕ್ಷಗಳ ಸಂಸದರು ಗುರುವಾರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರ ಗದ್ದಲದ ನಡುವೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅವರು ತಮ್ಮ ಹೇಳಿಕೆಯನ್ನು ಬಲವಂತವಾಗಿ ಮೊಟಕುಗೊಳಿಸಬೇಕಾಯಿತು.

ಪೆಗಾಸಸ್ ಕುರಿತು ವೈಷ್ಣವ್ ಅವರು ಹೇಳಿಕೆ ನೀಡಲು ಎದ್ದು ನಿಲ್ಲುತ್ತಿದ್ದಂತೆಯೇ ಅವರತ್ತ ನುಗ್ಗಿದ ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್, ಅವರ ಕೈಯಲ್ಲಿದ್ದ ಹಾಳೆಗಳನ್ನು ಕಿತ್ತುಕೊಂಡು, ಹರಿದು ಬಳಿಕ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರತ್ತ ಎಸೆದರು. ಇದರಿಂದ ವೈಷ್ಣವ್ ಅವರು ತಮ್ಮ ಹೇಳಿಕೆಯ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ.

ಬಳಿಕ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಅದಕ್ಕೂ ಮುನ್ನ ಒಮ್ಮೆ 12 ಗಂಟೆವರೆಗೆ ಕಲಾಪ ಮುಂದೂಡಲಾಗಿತ್ತು. 2 ಗಂಟೆಯ ಬಳಿಕ ಸಂಸದರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದರು. ಸದಸ್ಯರಿಗೆ ವಿಷಯಗಳ ಬಗ್ಗೆ ಚರ್ಚಿಸಲು ಆಸಕ್ತಿ ಇಲ್ಲದಂತೆ ಕಾಣಿಸುತ್ತದೆ ಎಂದು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದರು.

‘ಸಚಿವರ ವರ್ತನೆ ದುರದೃಷ್ಟಕರ. ವಿರೋಧದ ನಡುವೆಯೂ ಐಟಿ ಸಚಿವರು ಹೇಳಿಕೆ ನೀಡಿದ ರೀತಿಯು, ಸರಕಾರವು ಈ ವಿಷಯವನ್ನು ಅಣಕಿಸಲು ಮಾತ್ರ ಬಯಸಿದೆ ಎಂದು ತೋರಿಸುತ್ತದೆ’ ಎಂದು ಆರ್‌ಜೆಡಿಎ ಸಂಸದ ಮನೋಜ್ ಸಿನ್ಹಾ ಆರೋಪಿಸಿದರು.

ಲೋಕಸಭೆಯಲ್ಲಿಯೂ ಸುಗಮ ಕಲಾಪ ನಡೆಯಲಿಲ್ಲ. ಕೆಳಮನೆಯನ್ನು ಕೂಡ ಮೂರು ಬಾರಿ ಮುಂದೂಡಲಾಯಿತು. ಪ್ರಶ್ನೋತ್ತರ ಕಲಾಪ ಕೇವಲ 12 ನಿಮಿಷ ನಡೆಯಿತು. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳದ ಸಂಸದರು ಕೃಷಿ ಕಾಯ್ದೆಗಳ ಕುರಿತು ಪ್ರಸ್ತಾಪಿಸಿ ಪ್ರತಿಭಟಿಸಿದರೆ, ಟಿಎಂಸಿ ಸಂಸದರು ಪೆಗಾಸಸ್ ಬೇಹುಗಾರಿಕೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಜತೆಗೆ ದೈನಿಕ್ ಭಾಸ್ಕರ್ ಪತ್ರಿಕೆಯ ಸಮೂಹದ ಮೇಲೆ ನಡೆದ ಐಟಿ ದಾಳಿಯ ವಿಷಯವನ್ನೂ ಪ್ರಸ್ತಾಪಿಸಿ ಸರಕಾರದ ವಿರುದ್ಧ ಆರೋಪಗಳನ್ನು ಮಾಡಿದರು.

- Advertisement -spot_img

LEAVE A REPLY

Please enter your comment!
Please enter your name here

- Advertisement -spot_img
Latest News

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ 999 ಹೆಡ್‌ಕಾನ್‌ಸ್ಟೆಬಲ್‌ಗಳ ವರ್ಗಾವಣೆ!

ಬೆಂಗಳೂರು: ನಗರದಲ್ಲಿ 999 ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಏಕಕಾಲಕ್ಕೆ ಸರಿ ಸುಮಾರು ಒಂದು ಸಾವಿರ ಮಂದಿಯನ್ನು ವರ್ಗಾವಣೆ ಮಾಡಿರುವುದು ಇದೇ...
- Advertisement -spot_img

More Articles Like This

- Advertisement -spot_img