Sunday, July 25, 2021

ಯಡಿಯೂರಪ್ಪ ಅವರ ನಿರ್ಗಮನ ಗೌರವಯುತವಾಗಿರಬೇಕು, ಉಮೇಶ್ ಕತ್ತಿ ಆಗ್ರಹ

Must Read
ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನವಾಗಬೇಕು. ಅವರು ಪಕ್ಷದ ತೀರ್ಮಾನವನ್ನು ಗೌರವಿಸುತ್ತಾರೆ. ಅವರು ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಪಕ್ಷವೂ ಅವರಿಗೆ ಗೌರವ ಕೊಡುತ್ತದೆ ಎಂದು ಸಚಿವ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಮುಖ್ಯಮಂತ್ರಿ ಗಳು ಪಾಲನೆ ಮಾಡುತ್ತಾರೆ ಹಾಗೂ ನಾವು ಕೂಡಾ ಅದನ್ನು ಪಾಲನೆ ಮಾಡುತ್ತೇವೆ ಎಂದರು.

ಬಿಎಸ್‌ ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಬೇಕು ಎನ್ನುವ ಬೇಡಿಕೆ ಇದೆ. ಆ ಭಾಗದ ಯಾವುದೇ ಸಮುದಾಯದವರು ಸಿಎಂ ಆದರೂ ಸಹಕಾರ ನೀಡುತ್ತೇವೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಶಾಸಕರು ಹೆಚ್ಚಿದ್ದಾರೆ. ಯಾರನ್ನೇ ಸಿಎಂ ಮಾಡಿದರೂ ನಮ್ಮ ಸ್ವಾಗತವಿದೆ ಎಂದರು.

ನಾನೂ 8 ಬಾರಿ ಶಾಸಕನಾಗಿದ್ದೇನೆ. ನಾನೂ ಸಿಎಂ ಆಗಿ ರಾಜ್ಯ ಆಳಬೇಕು ಅಂತ ಆಸೆ ಇದೆ. ನಾನೂ ಯಡಿಯೂರಪ್ಪ ಅವರ ಸಮನಾಗಿದ್ದೇನೆ. ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಯಾವತ್ತಾದರೂ ಒಂದು ಒಂದು ದಿನ ಸಿಎಂ ಆಗ್ತಿನಿ ಅನ್ನುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಈಗ ಹೈಕಮಾಂಡ್ ಭೇಟಿಗೆ ಹೋಗಲ್ಲ. ಬಿಜೆಪಿಯಲ್ಲಿ 75 ವರ್ಷದ ಲಿಮಿಟ್ ಇದೆ. ಯಡಿಯೂರಪ್ಪ ಅವರಿಗೆ 80 ವರ್ಷ ಹತ್ತಿರ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಅವರೂ ಬದ್ದರಾಗಿತ್ತಾರೆ. ನಾವೂ ಬದ್ದರಾಗಿರುತ್ತೇವೆ ಎಂದು ಹೇಳಿದರು.

- Advertisement -spot_img

LEAVE A REPLY

Please enter your comment!
Please enter your name here

- Advertisement -spot_img
Latest News

ಸಿಎಂ ಬದಲಾವಣೆ ಚರ್ಚೆ ಊಹಾಪೋಹ: ಸಂಸದ ಎಸ್‌. ಮುನಿಸ್ವಾಮಿ

ಕೋಲಾರ: ರಾಜ್ಯದಲ್ಲಿ ಕುರಿತು ಊಹಾಪೋಹಗಳ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಮಟ್ಟದವರೆಗೂ ಆ ರೀತಿಯ ಯಾವುದೇ ವಿಚಾರಗಳು ಗಮನಕ್ಕೆ ಬಂದಿಲ್ಲ. ಹೈಕಮಾಂಡ್‌ ಯಾವ ತೀರ್ಮಾನ ಕೈಗೊಂಡರೂ...
- Advertisement -spot_img

More Articles Like This

- Advertisement -spot_img