Sunday, July 25, 2021

ಮೈದುಂಬಿ ಹರಿಯುತ್ತಿದೆ ಅಘನಾಶಿನಿ ನದಿ: ಶಿರಸಿ – ಗೋಳಿಮಕ್ಕಿ ರಸ್ತೆ ಸಂಚಾರ ಕೆಲ ಕಾಲ ವ್ಯತ್ಯಯ

Must Read
(): ಗುರುವಾರ ಸುರಿದ ಧಾರಾಕಾರ ಮಳೆಗೆ ಅಘನಾಶಿನಿ ಮೈ ತುಂಬಿಕೊಂಡಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಸರಕುಳಿ ಸೇತುವೆಯ ಮೇಲೆ ನದಿ ನೀರು ಉಕ್ಕಿ ಹರಿದಿದ್ದು, ಇದರಿಂದ ಕೆಲ ಕಾಲ ಶಿರಸಿ – ಗೋಳಿಮಕ್ಕಿ ರಸ್ತೆ ಸಂಚಾರ ವ್ಯತ್ಯಯಗೊಂಡಿತು.

ಮಧ್ಯಾಹ್ನದ ವೇಳೆ ಸೇತುವೆಗೆ ತಾಗಿ ನದಿ ನೀರು ಹರಿದಿದೆ. ಆದರೆ, ಮದ್ಯಾಹ್ನದ ನಂತರ ಮಳೆಯ ಪ್ರಮಾಣ ಇನ್ನೂ ಜಾಸ್ತಿಯಾಗಿದ್ದರಿಂದ ಸಂಜೆ 6:30ರ ವೇಳೆ ಸೇತುವೆಯ ಮೇಲೆ ನೀರು ಹರಿದಿದೆ.

ಅಘನಾಶಿನಿ ನದಿ ದಟ್ಟ ಕಾಡಿನಲ್ಲಿ ಹರಿಯುತ್ತದೆ. ಇದರಿಂದಾಗಿ ತನ್ನ ಪ್ರವಾಹದೊಂದಿಗೆ ಬೃಹತ್ ಮರದ ದಿಮ್ಮಿಗಳನ್ನೂ ಹೊತ್ತು ತರುತ್ತದೆ. ಸೇತುವೆಯ ಇಕ್ಕೆಲಗಳಲ್ಲಿರುವ ವಾಹನ ರಕ್ಷಣಾ ಕಂಬಗಳಿಗೆ ಇವು ಸತತವಾಗಿ ಬಡಿಯುತ್ತಿದ್ದ ಕಾರಣ ಅವು ಮುರಿದು ಹಾನಿಗೊಳಗಾಗಿದ್ದವು.

ಲೋಕೋಪಯೋಗಿ ಇಲಾಖೆ ಈ ವರ್ಷ ರಕ್ಷಣಾ ಕಂಬಗಳ ನಿರ್ಮಾಣ ಕಾರ್ಯ ನಡೆಸಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಸ್ಥಿತಿಯಿಂದ ಈ ಕಾರ್ಯಕ್ಕೆ ತೊಡಕುಂಟಾಗಿದೆ.

- Advertisement -spot_img

LEAVE A REPLY

Please enter your comment!
Please enter your name here

- Advertisement -spot_img
Latest News

ಸಿಎಂ ಬದಲಾವಣೆ ಚರ್ಚೆ ಊಹಾಪೋಹ: ಸಂಸದ ಎಸ್‌. ಮುನಿಸ್ವಾಮಿ

ಕೋಲಾರ: ರಾಜ್ಯದಲ್ಲಿ ಕುರಿತು ಊಹಾಪೋಹಗಳ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಮಟ್ಟದವರೆಗೂ ಆ ರೀತಿಯ ಯಾವುದೇ ವಿಚಾರಗಳು ಗಮನಕ್ಕೆ ಬಂದಿಲ್ಲ. ಹೈಕಮಾಂಡ್‌ ಯಾವ ತೀರ್ಮಾನ ಕೈಗೊಂಡರೂ...
- Advertisement -spot_img

More Articles Like This

- Advertisement -spot_img