Sunday, July 25, 2021

ದಾವಣಗೆರೆ ವೃದ್ಧೆ ಕೊಲೆ ಕೇಸ್‌: ಹಂತಕನ ಪತ್ತೆ ಹಚ್ಚಿದ ಪೊಲೀಸ್ ಶ್ವಾನ ‘ತುಂಗಾ’..!

Must Read
: ಟವೆಲ್‌ನಿಂದ ಕತ್ತು ಹಿಸುಕಿ ವೃದ್ಧೆಯೊಬ್ಬರನ್ನು ಮಾಡಿದ್ದ ಆರೋಪಿಯನ್ನು ತುಂಗಾ ಎಂಬ ಹೆಸರಿನ ಪತ್ತೆ ಹಚ್ಚಿದ್ದು, ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಲೂಕು ಕಕ್ಕರಗೊಳ್ಳದ ಬಿ. ಜಿ. ರೇವಣ ಸಿದ್ದಪ್ಪ ಬಂಧಿತ ಆರೋಪಿ. ಜಮೀನು ಲಪಟಾಯಿಸುವ ಉದ್ದೇಶದಿಂದ ಜುಲೈ 19ರಂದು ಕಕ್ಕರಗೊಳ್ಳದ ಮನೆಯೊಂದರಲ್ಲಿ ವೃದ್ಧೆ ಗೌರಮ್ಮ (75) ಎಂಬುವರ ಕುತ್ತಿಗೆಗೆ ದುಷ್ಕರ್ಮಿಗಳು ಟವೆಲ್‌ ಬಿಗಿದು ಕೊಲೆ ಮಾಡಿ, ಶಾಲಿನಲ್ಲಿ ಎರಡು ಕಾಲುಗಳನ್ನು ಮಡಚಿ ಕಟ್ಟಿ ಹಾಕಿ ಹೋಗಿದ್ದರು.

ಕೊಲೆಯಾದ ಗೌರಮ್ಮನ ಬಳಿ ಆಸ್ತಿ ಇದ್ದು, ಸಾಲ ಕೊಟ್ಟಿದ್ದರು. ಮಗ ಕರಿಬಸಪ್ಪ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊಲೆಯಾದ ಜಾಗಕ್ಕೆ ಶ್ವಾನ ದಳದ ತಂಡದ ಪ್ರಕಾಶ್‌, ಶಫೀವುಲ್ಲಾ, ರೋಹಿತ್‌ ರಾತ್ರಿಯೇ ತುಂಗಾವನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಕುತ್ತಿಗೆಗೆ ಬಿಗಿದಿದ್ದ ಟವೆಲ್‌ನ್ನು ಮೂಸು ಹಿಡಿದಿದ್ದಾರೆ. ಬೆವರಿನ ವಾಸನೆ ಹಿಡಿದ ತುಂಗಾ ಶ್ವಾನ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಆರೋಪಿಯಿಂದ ಸುಮಾರು 4.10 ಲಕ್ಷ ಮೌಲ್ಯದ 2 ಬಂಗಾರದ ಬಳೆಗಳು, ಎರಡು ಎಳೆಯ 1 ಅವಲಕ್ಕಿ ಮಾಡೆಲ್‌ನ ಚಿನ್ನದ ಚೈನ್‌ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದ ಪೊಲೀಸ್‌ ತಂಡ ಯಶಸ್ವಿಯಾಗಿದೆ.

- Advertisement -spot_img

LEAVE A REPLY

Please enter your comment!
Please enter your name here

- Advertisement -spot_img
Latest News

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ 999 ಹೆಡ್‌ಕಾನ್‌ಸ್ಟೆಬಲ್‌ಗಳ ವರ್ಗಾವಣೆ!

ಬೆಂಗಳೂರು: ನಗರದಲ್ಲಿ 999 ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಏಕಕಾಲಕ್ಕೆ ಸರಿ ಸುಮಾರು ಒಂದು ಸಾವಿರ ಮಂದಿಯನ್ನು ವರ್ಗಾವಣೆ ಮಾಡಿರುವುದು ಇದೇ...
- Advertisement -spot_img

More Articles Like This

- Advertisement -spot_img