Sunday, July 25, 2021

ಕುಣಿತ ನಿಲ್ಲಿಸಿದ ‘ಕರಡಿ’ಗೆ ಭಾವಪೂರ್ಣ ವಿದಾಯ: ಊರ ತುಂಬಾ ಹಬ್ಬದ ಹೋರಿಯ ಮೆರವಣಿಗೆ..!

Must Read
ಶಿರಾಳಕೊಪ್ಪ (): ಸಮೀಪದ ಬಿಸಲಹಳ್ಳಿ ಗ್ರಾಮದ ಹಬ್ಬದ ಹೋರಿಯೊಂದು ಮೃತಪಟ್ಟಿದ್ದು, ನೆಚ್ಚಿನ ಹೋರಿಯನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡುವ ಗ್ರಾಮಸ್ಥರು ಭಾವಪೂರ್ಣ ಹೇಳಿದರು.

ಗ್ರಾಮದ ಹೇಮನಗೌಡರ ಶಿವಯೋಗಪ್ಪ ಅವರಿಗೆ ಸೇರಿದ ”, ಎರಡು ವರ್ಷದ ಕರು ಇದ್ದಾಗಲೇ ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡು ಬೆದರಿಸುವ ಹಬ್ಬಗಳಲ್ಲಿ ಸುತ್ತಮುತ್ತಲಿನ ಗ್ರಾಮ ಹಾಗು ನೆರೆಯ ಜಿಲ್ಲೆಗಳಲ್ಲೂ ಹೆಸರು ಮಾಡಿತ್ತು.

ಯಾವುದೇ ಗ್ರಾಮಗಳಲ್ಲಿ ಹೋರಿ ಬೆದರಿಸುವ ಹಬ್ಬ ಇದ್ದರೆ ಅಲ್ಲಿ ‘ಕರಡಿ’ ಉತ್ತಮವಾಗಿ ಪ್ರದರ್ಶನ ತೋರಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. 20 ವರ್ಷಗಳ ಕಾಲ ಒಂದಲ್ಲಾ ಒಂದು ಬಹುಮಾನಗಳನ್ನು ಗೆದ್ದುಕೊಂಡಿದೆ. ಹಿರೆಕೆರೂರು, ಹಾನಗಲ್‌, ಮಾಸೂರು, ಬಿಳಕಿ, ಶಿರಾಳಕೊಪ್ಪ, ಹಾವೇರಿಯ ದೇಸೂರು, ಆನವಟ್ಟಿ, ತಡಸನಹಳ್ಳಿ, ಜಡೆ, ಕುಬಟೂರು ಉತ್ತರ ಕರ್ನಾಟಕ ಭಾಗದ ಇನ್ನೂ ನಾನಾ ಕಡೆ ಭಾಗವಹಿಸಿತ್ತು.

ಬಂಗಾರದ ಉಂಗುರ, ಟಿವಿ, ಗೋದ್ರೇಜ್‌ ಬೀರು, ಸೈಕಲ್‌ ಸೇರಿದಂತೆ ಹಲವು ಬಹುಮಾನಗಳನ್ನು ಬಾಚಿಕೊಂಡಿತ್ತು. ವಯೋಸಹಜವಾಗಿ ಬುಧವಾರ ಮೃತಪಟ್ಟ ಹೋರಿಗೆ ಗ್ರಾಮಸ್ಥರು ಟ್ರ್ಯಾಕ್ಟರ್‌ ಮೆಲೆ ಮೆರವಣಿಗೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದರು.

- Advertisement -spot_img

LEAVE A REPLY

Please enter your comment!
Please enter your name here

- Advertisement -spot_img
Latest News

ಸಿಎಂ ಬದಲಾವಣೆ ಚರ್ಚೆ ಊಹಾಪೋಹ: ಸಂಸದ ಎಸ್‌. ಮುನಿಸ್ವಾಮಿ

ಕೋಲಾರ: ರಾಜ್ಯದಲ್ಲಿ ಕುರಿತು ಊಹಾಪೋಹಗಳ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಮಟ್ಟದವರೆಗೂ ಆ ರೀತಿಯ ಯಾವುದೇ ವಿಚಾರಗಳು ಗಮನಕ್ಕೆ ಬಂದಿಲ್ಲ. ಹೈಕಮಾಂಡ್‌ ಯಾವ ತೀರ್ಮಾನ ಕೈಗೊಂಡರೂ...
- Advertisement -spot_img

More Articles Like This

- Advertisement -spot_img